https://x.com/airnews_dharwad/status/1945744469069898119
ಧಾರವಾಡ ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗದಿಂದ ಇಂದು ಮಧ್ಯಾಹ್ನ ೧೨ ಗಂಟೆಗೆ ರಾಜ್ಯವ್ಯಾಪಿ ಪ್ರಸಾರವಾದ ಪ್ರದೇಶ ಸಮಾಚಾರ.
<><><>
JULY 17, 2025
AKASHAVANI - DHARWAD
PRADESH SAMACHARA (KANNADA) 12.00 P.M.
<><><>
ಪ್ರಸಾರ ಭಾರತಿ, ಆಕಾಶವಾಣಿ
ಧಾರವಾಡ
ಪ್ರದೇಶ ಸಮಾಚಾರ
<><><>
೧. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮನ್ ಕಿ ಬಾತ್ ನಲ್ಲಿ, ವಿಶೇಷವಾಗಿ ಉಲ್ಲೇಖಿಸಿದ ಹಿನ್ನೆಲೆ, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನ ಶೈಲಿ ಉತ್ತೇಜಿಸಲು, ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಬೇಕಾದ ಎಣ್ಣೆಯ ಪ್ರಮಾಣದ ಬಗ್ಗೆ, ಮಾಹಿತಿ ನೀಡುವ ಫಲಕಗಳನ್ನು ಅಳವಡಿಸುವಂತೆ, ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ - ಸಿ.ಬಿ.ಎಸ್.ಇ., ಶಾಲೆಗಳಿಗೆ ಸೂಚಿಸಿದೆ.
<><><>
೨. ಧಾರವಾಡದ, ಭಾರತೀಯ ತಂತ್ರಜ್ಞಾನ ಸಂಸ್ಥೆ ಐ.ಐ.ಟಿ. ಪ್ರಾಯೋಜಿತ ನಿಧಿ ಯೋಜನೆ ಅಡಿ, ಪ್ರಸಕ್ತ ವರ್ಷ, ೭೧ ಕೋಟಿ ರೂಪಾಯಿ ಮೌಲ್ಯದ, ೧೪೯ ಯೋಜನೆಗಳು ಸೇರಿದಂತೆ, ೫ ಕೋಟಿ ಮೊತ್ತದ, ಸಲಹಾ ಯೋಜನೆಗಳನ್ನು ಸಹ ಪಡೆದುಕೊಂಡಿದೆ ಎಂದು, ಐ.ಐ.ಟಿ.ಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ವಿದ್ಯಾಧಿಕಾರಿ, ಪ್ರತ್ಯಾಸ ಭೂಯಿ ತಿಳಿಸಿದ್ದಾರೆ. ಬೆಂಕಿ ತಗುಲಿ ಕಟ್ಟದೊಳಗೆ ಸಿಲುಕಿರುವವರ ಪತ್ತೆಗೆ, ಅಗ್ನಿಶಾಮಕ ದಳಕ್ಕೆ ಡ್ರೋನ್ ಸಿದ್ಧ ಪಡಿಸಲಾಗುತ್ತಿದೆ. ವಿದ್ಯುತ್ ಪ್ರಸರಣ ಮಾರ್ಗ ಹಾಗೂ ಪೈಪ್‌ಲೈನ್ ಮೇಲ್ವಿಚಾರಣೆಗೆ, ರೊಬೋಟ್ ತಯಾರಿಸಲಾಗುತ್ತಿದೆ ಎಂದರು.
<><><>
myIIT
